Sunday, May 28, 2017

ಕಾತರ

ನಿನ್ನ ಕೋಮಲ ಕೈ ಕಾಲು
ನಿನ್ನ ಮೃದು ತಲೆಯ ಕೂದಲ ಸಾಲು
ಕಲ್ಪಿಸಿಕೊಳ್ಳುತ್ತಿರುವೆ

ನಿನ್ನ ಮಂದ-ಧೃತಗತಿಯ ಚಲನ
ಈ ಚಲನದಿ ತಾಯಿಯ ಜೊತೆ ನಿನ್ನ ಮಿಲನ
ಉಹಿಸಿಕೊಳ್ಲುತ್ತಿರುವೆ

ಎತ್ತಿಕೊಳ್ಳಬಲ್ಲೆ ನಾ ನಿನ್ನ ಸ್ವಲ್ಪ ತಡವಾಗಿ
ನೀನಿನ್ನೂ ಹೊರಳುತಿರುವೆ ಒಳಗೆ ಬಲವಾಗಿ
ನಿನ್ನ ಆಗಮನದ ಸ್ವಾಗತಕೆ ಕಾಯುತಿರುವೆ
ಬೇಗನೆ ಧರೆಗಿಳಿದು ಕಾತರಕ್ಕೆ ಕೊನೆಯಿಡು ಎಂದು ಹಂಬಲಿಸುತಿರುವೆ

Wednesday, May 17, 2017

ಮೊದಲಾಸಲ

ಮೊದಲಾಸಲ ನಿನ್ನ ನೋಡಿದೆ ನಾ ತೆರೆಯ ಮೇಲೆ
ನೀ ತೇಲುತಿರುವೆ ಕ್ಷೀರ ಸಾಗರದ ಮೇಲೆ
ಮತ್ತೆ ಮತ್ತೆ ತಿರುಗುವೆ ನೀ ಬುಗುರಿಯ ಹಾಗೆ
ಖುಷಿಯಿಂದ ನಾ ನಿನ್ನ ದಿಟ್ಟಿಸುತ್ತಿದ್ದೆ ಹುಚ್ಚನ ಹಾಗೆ !!