Thursday, June 21, 2018

ಓ ಮಾನಸಿ

ನಿನ್ನ ವೈಖರಿ ತರುತಿದೆ ಮುಖದಿ ಮುಗುಳುನಗೆ
ನಿನ್ನ ನಡೆ-ನುಡಿ-ಆಟ ದಿನ-ದಿನಕೂ ಬಗೆ ಬಗೆ

ಕಣ್ಣೆದುರಿಗೆ ಕಾಣದಿರೆ ನೀ ಒಂದು ಕ್ಷಣ
ಮನದಲ್ಲಿ ನಿನ್ನದೇ ಚಿತ್ರ ಕ್ಷಣ-ಕ್ಷಣ

ಮಲಗಿದಲ್ಲೇ ಈಜುವೆ ನೀ ಕೈ-ಕಾಲು ಬಡಿದು
ತಿರುಗಿ ನೋಡಿ ಕಿರುನಗುವೇ ಸ್ವಲ್ಪ ದೂರ ನಡೆದು

ಬಣ್ಣಿಸಹತ್ತಿದರೆ ಮುಗಿಯುತ ಸಾಗುವುದು ಲೇಖನಿಯಲ್ಲಿನ ಮಸಿ
ಪ್ರತಿ ಸಲವೂ ನೀ ದೂರ ಮಾಡುವೆ ನನ್ನ ಮನದ ಕಸಿವಿಸಿ

ಎಲ್ಲರ ಚಿಂತೆಯ ತಣಿಸಿ
ಹಿರಿಯರ ಪಾದಕೆ ನಮಿಸಿ
ಭವಿಷ್ಯದ ನಕ್ಷೆಯ ನೀನೇ ರೂಪಿಸಿ
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಅಂಧಕಾರವ ಅಳಿಸಿ
ಬಿದ್ದವರ ಎಬ್ಬಿಸಿ
ಮುನಿದವರ ಒಪ್ಪಿಸಿ
ದುರ್ನಡತೆಯ ತಪ್ಪಿಸಿ
ಜಗವ ಕಾಯುವವಳಾಗು ನೀ - ಓ ಮಾನಸಿ . . . ಓ ಮಾನಸಿ!

No comments:

Post a Comment

Go, comment :)