Thursday, July 6, 2017

ಅಮ್ಮನಿಗೆ ಐದು

ಹಸಿದಿಹಳು ಅಮ್ಮ ನಿನಗಾಗಿ |
ಬಿಡುವಿರದೆ ಒಡನಾಡಿ
ವಿಶ್ರಮಿಸಿಹಳು ಅಲೆದಾಡಿ |
ಅಡಿಗಡಿಗೆ ನಿಲ್ಲುವಳು
ಬೆವರೊರೆಸಿ ನಡಿಯುವಳು |

ಮಧ್ಯರಾತ್ರಿ ಎದ್ದು ಕೂತು
ಆಡುವಳು ನಾಲ್ಕೆಂಟು ಮಾತು |
ಮತ್ತೆ ಮಲಗಿ ಕನಸ ಕಂಡು
ಕನಸಲ್ಲೂ ತುಸು ಉಂಡು |
ಮತ್ತೆ ಹಸಿದಿಹಳು ಅಮ್ಮ ನಿನಗಾಗಿ |